8. ಚಂದ್ರಶೇಖರ ಕಂಬಾರ –
- ಜನವರಿ 2, 1937 ರಂದು ಬೆಳಗಾವಿ ಜಿಲ್ಲೆ, ಘೋಡಿಗೇರಿ ಗ್ರಾಮದಲ್ಲಿ ಜನಿಸಿದರು.
ಪ್ರಸಿದ್ಧ ಕೃತಿಗಳು :-
ಕಾವ್ಯಗಳು-- ಮುಗುಳು
- ಹೇಳತೇನ ಕೇಳ
- ತಕರಾರಿನವರು
- ಸಾವಿರಾರು ನೆರಳು
- ಬೆಳ್ಳಿ ಮೀನು
- ಅಕ್ಕಕ್ಕು ಹಾಡುಗಳೆ
- ಈ ವರೆಗಿನ ಹೇಳತೇನ ಕೇಳ
- ಬೆಂಬತ್ತಿದ ಕಣ್ಣು
- ನಾರ್ಸಿಸ್ಸ್
- ಋಷ್ಯಶೃಂಗ 1970 (ಸಿನಿಮಾ ಆಗಿದೆ)
- ಜೋಕುಮಾರಸ್ವಾಮಿ (ನಾಟ್ಯ ರಂಗ ಪ್ರಶಸ್ತಿ).
- ಚಾಲೇಶ
- ಸಂಗ್ಯಾಬಾಳ್ಯಾ
- ಕಿಟ್ಟಿಯ ಕಥೆ
- ಚಕೋರಿ
- ಕಾದಂಬರಿಗಳು -
- ಅಣ್ಣತಂಗಿ
- ಕರಿಮಾಯಿ - ಸಿನಿಮಾ ಆಗಿದೆ
- ಜಿ.ಕೆ.ಮಾಸ್ತರ್ ಪ್ರಣಯ ಪ್ರಸಂಗ
- ಸಿಂಗಾರವ್ವ ಮತ್ತು ಅರಮನೆ
ಪ್ರಶಸ್ತಿಗಳು ಮತ್ತು ಸನ್ಮಾನಗಳು -
- ಅಕಾಡೆಮಿ ರತ್ನ ಪ್ರಶಸ್ತಿ 2011(ಕೇಂದ್ರ ಸಂಗೀತ ನಾಟಕ ಅಕಾಡೆಮಿ)
- ಜ್ಞಾನಪೀಠ ಪ್ರಶಸ್ತಿ 2010 (8ನೇ ಜ್ಞಾನಪೀಠ ಪ್ರಶಸ್ತಿ)
- ಜೋಶು ಸಾಹಿತ್ಯ ಪುರಸ್ಕಾರಂ 2005 (ಆಂದ್ರಪ್ರದೇಶ ಸರಕಾರ)
- ನಾಡೋಜ ಪ್ರಶಸ್ತಿ 2004 (ಹಂಪಿ ಕನ್ನಡ ವಿಶ್ವವಿದ್ಯಾಲಯ)
- ಪಂಪ ಪ್ರಶಸ್ತಿ 2004
- ಸಂತ ಕಬೀರ್ ಪ್ರಶಸ್ತಿ 2002
- ಪದ್ಮಶ್ರೀ ಪ್ರಶಸ್ತಿ 2001
- ಸಿರಿಸಂಪಿಗೆ ನಾಟಕಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ 1991
- ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ 1989
- ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ 1988
- ನಂದಿಕರ್ ಪ್ರಶಸ್ತಿ 1987 (ಕಲ್ಕತ್ತ)
- ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ 1987
- ಕುಮಾರ ಆಶನ್ ಪ್ರಶಸ್ತಿ 1984 (ಕೇರಳ ಸರಕಾರ)
- ಕನ್ನಡ ಸಾಹಿತ್ಯ ಪರಿಷತ್ ಪ್ರಶಸ್ತಿ 1975
- ಮಧ್ಯಪ್ರದೇಶ ಸರ್ಕಾರ ಕೊಡುವ ಕಾಳಿದಾಸ ಸಮ್ಮಾನ್ ಪ್ರಶಸ್ತಿ
ವಿ.ಕೃ. ಗೋಕಾಕ –
- ಇವರ ಪೂರ್ಣ ಹೆಸರು ವಿನಾಯಕ ಕೃಷ್ಣ ಗೋಕಾಕ.
- ಜನನ 1909 ರ ಆಗಸ್ಟ್ 9 ರಂದು ಹಾವೇರಿ ಜಿಲ್ಲೆಯ ಸವಣೂರು ಎಂಬಲ್ಲಿ.
- ಮುಕ್ತ ಛಂದಸ್ಸು ಮೊದಲ ಬಾರಿ ಬೆಳಕಿಗೆ ತಂದವರು.
- ವಿನಾಯಕ ಕೃಷ್ಣ ಗೋಕಾಕರು ಭಾರತೀಯ ಜ್ಞಾನಪೀಠ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದರು.
ಪ್ರಸಿದ್ಧ ಕೃತಿಗಳು -
- ಅವರ ಮೊದಲ ಪ್ರಕಟಿತ ಕೃತಿ "ಕಲೋಪಾಸಕರು".
- ಸಮುದ್ರ ಗೀತೆಗಳು
- ಸಮುದ್ರದಾಚೆಯಿಂದ
- ಭಾರತ ಸಿಂಧು ರಶ್ಮಿ
- ದ್ಯಾವಾ ಪೃಥಿವೀ
- ಸಿಮ್ಲಾಸಿಂಫನಿ.
- ಇದಲ್ಲ ನಾಳೆ(ಚಂಪೂ).
- ಪಾರಿಜಾತದಡಿಯಲ್ಲಿ.
- ಅಭ್ಯುದಯ.
- ಭಾಗವತ ನಿಮಿಷಗಳು.
- ಭಾರತ ಸಿಂಧೂರ.
- ಸಮರಸವೇ ಜೀವನ.
- ಇಜ್ಜೋಡು.
- ಏರಿಳಿತ.
- ಸಮುದ್ರಯಾನ.
- ನಿರ್ವಹಣ ನರಹರಿ.
ಗೌರವಗಳು -
- ಕೇಂದ್ರ ಸರ್ಕಾರ 1961ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿದೆ.
- ಹಂಪಿ ವಿಶ್ವವಿದ್ಯಾನಿಲಯದಿಂದ ಗೌರವ ಡಿ.ಲಿಟ್ ಪದವಿ1965.
- ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಪದವಿ ಮತ್ತು
- ಜ್ಞಾನಪೀಠ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷ ಪದವಿ
- ಇವೆರಡೂ ಕನ್ನಡಿಗರೊಬ್ಬರಿಗೆ ಮೊದಲ ಬಾರಿಗೆ ಸಂದ ಗೌರವಗಳಾಗಿವೆ.
- ಅವರ ಮೇರು ಕೃತಿ "ಭಾರತ ಸಿಂಧು ರಶ್ಮಿ"ಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ,
- ಭಾರತೀಯ ವಿದ್ಯಾಭವನದ ರಾಜಾಜಿ ಪ್ರಶಸ್ತಿ ಮತ್ತು ಐ.ಬಿ.ಎಚ್. ಪ್ರಶಸ್ತಿಗಳೂ ದೊರಕಿವೆ.
- ಗೋಕಾಕರ "ದ್ಯಾವಾ ಪೃಥಿವೀ" ಕವನ ಸಂಕಲನಕ್ಕೆ 1960ರಲ್ಲಿ
- ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಬಂದಿತು.
ಕುವೆಂಪು –
- ಇವರ ಪೂರ್ಣ ಹೆಸರು ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ. ಕಾವ್ಯನಾಮ ಕುವೆಂಪು.
- ವರಕವಿ ಬೇಂದ್ರೆಯವರಿಂದ 'ಯುಗದ ಕವಿ ಜಗದ ಕವಿ' ಎನಿಸಿಕೊಂಡವರು.
- ವಿಶ್ವಮಾನವ ಸಂದೇಶ ನೀಡಿದವರು.
ಪ್ರಸಿದ್ಧ ಕೃತಿಗಳು :-
ಖಂಡಕಾವ್ಯ -- ಚಿತ್ರಾಂಗದಾ
- ಕೊಳಲು ,
- ಪಾಂಚಜನ್ಯ
- ನವಿಲು ,
- ಕಲಾಸುಂದರಿ ,
- ಕಥನ ಕವನಗಳು ,
- ಕೋಗಿಲೆ ಮತ್ತು ಸೋವಿಯಟ್ ರಷ್ಯಾ ,
- ಪ್ರೇಮ ಕಾಶ್ಮೀರ
- ಅಗ್ನಿಹಂಸ
- ಕಾನೂರು ಹೆಗ್ಗಡತಿ ,
- ಮಲೆಗಳಲ್ಲಿ ಮದುಮಗಳು
- ಕನ್ನಡದ ಎರಡನೆಯ 'ರಾಷ್ಟ್ರಕವಿ. ಜ್ಞಾನಪೀಠ (ಶ್ರೀರಾಮಾಯಣ ದರ್ಶನಂ) ಪ್ರಶಸ್ತಿ ಹಾಗೂ
- ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನೂ ಮೊದಲ ಬಾರಿಗೆ ಕನ್ನಡಕ್ಕೆ ತಂದುಕೊಟ್ಟವರು.
- ಕರ್ನಾಟಕ ಸರ್ಕಾರ ಕೊಡಮಾಡುವ ಕರ್ನಾಟಕ ರತ್ನ ಪ್ರಶಸ್ತಿ ಹಾಗೂ
- ಪಂಪ ಪ್ರಶಸ್ತಿಗಳನ್ನು ಮೊದಲ ಬಾರಿಗೆ ಪಡೆದವರು.
ಶಿವರಾಮ ಕಾರಂತ -
- (ಅಕ್ಟೋಬರ್ 10, 1902 - ಸೆಪ್ಟೆಂಬರ್12, 1997)
- "ಕಡಲತೀರದ ಭಾರ್ಗವ", "ನಡೆದಾಡುವ ವಿಶ್ವಕೋಶ" ಎಂದೇ ಖ್ಯಾತರಾಗಿದ್ದವರು.
ಪ್ರಸಿದ್ಧ ಕೃತಿಗಳು –
- ಅದೇ ಊರು, ಅದೆ ಮರ
- ಅಳಿದ ಮೇಲೆ
- ಅಂಟಿದ ಅಪರಂಜಿ
- ಆಳ, ನಿರಾಳ
- ಇದ್ದರೂ ಚಿಂತೆ
- ಉಕ್ಕಿದ ನೊರೆ
- ಒಂಟಿ ದನಿ
- ಔದಾರ್ಯದ ಉರುಳಲ್ಲಿ
- ಕಣ್ಣಿದ್ದೂ ಕಾಣರು
- ಸ್ಮೃತಿಪಟಲದಿಂದ (1,2,3)
- ಹುಚ್ಚು ಮನಸ್ಸಿನ ಹತ್ತು ಮುಖಗಳು
- ಕುಡಿಯರ ಕೂಸು
- ಚಿಗುರಿದ ಕನಸು
- ಚೋಮನ ದುಡಿ
- ಬೆಟ್ಟದ ಜೀವ
- ಮೂಕಜ್ಜಿಯ ಕನಸುಗಳು
ಗೌರವಗಳು -
- ಜ್ಞಾನಪೀಠ ಪ್ರಶಸ್ತಿ
- ಪದ್ಮಭೂಷಣ ಪ್ರಶಸ್ತಿ
- ವಿವಿಧ ವಿಶ್ವವಿದ್ಯಾನಿಲಯಗಳಿಂದ ಡಾಕ್ಟರೇಟ್
- ರಾವ್ ಬಹದೂರ್ ಪ್ರಶಸ್ತಿ
- ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
- ಪಂಪ ಪ್ರಶಸ್ತಿ
- ಜೈಮಿನಿ ಭಾರತ
- ತೊರವೆ ರಾಮಾಯಣ
- ಕರ್ನಾಟಕ ಭಾರತ ಕಥಾಮಂಜರಿ
- ಶ್ರೀ ರಾಮಾಯಣ ದರ್ಶನಂ
ಕುಮಾರವ್ಯಾಸ -
- ಕಾಲ: ಕ್ರಿ.ಶ. 1350-1400
- ಸ್ಥಳ : ಗದುಗಿನ ಕೋಳಿವಾಡ (ಈಗಿನ ಧಾರವಾಡ ಜಿಲ್ಲೆ, ಹುಬ್ಬಳ್ಳಿ ತಾಲೂಕಿನ ಕೋಳಿವಾಡ)
- ಆರಾಧ್ಯದೈವ: ಗದುಗಿನ ವೀರನಾರಾಯಣ
- ಕೃತಿ: ‘ಕರ್ಣಾಟಭಾರತ ಕಥಾಮಂಜರಿ’ ಇದಕ್ಕೆ ಕನ್ನಡಭಾರತ, ಗದುಗಿನ ಭಾರತ ಎಂಬ ಹೆಸರುಗಳೂ ಇವೆ.
ಜೈಮಿನಿ ಭಾರತ -
- ಜೈಮಿನಿ ಭಾರತ ಲಕ್ಷ್ಮೀಶನ ಕೃತಿ.
- ಇದರಲ್ಲಿ ಮಹಾಭಾರತದ ಅಶ್ವಮೇಧ ಪರ್ವದ ಕಥೆಯನ್ನು ಹೇಳಿದೆ.
- ವ್ಯಾಸಭಾರತದಲ್ಲಿ ಅಶ್ವಮೇಧ ಪರ್ವವು ಅಷ್ಟು ವಿಸ್ತಾರವಾಗಿಲ್ಲ.
- ವ್ಯಾಸಮುನಿಯ ಪ್ರಿಯ ಶಿಷ್ಯನಾದ ಜೈಮಿನಿ ಮುನಿಯು ಅಶ್ವಮೇಧ ಪರ್ವವನ್ನು ವಿಸ್ತಾರವಾಗಿ ರಚಿಸಿದ್ದಾನೆ.
- ಅದನ್ನು ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಂಡು ಲಕ್ಷ್ಮೀಶ ಕನ್ನಡದಲ್ಲಿ 'ಜೈಮಿನಿ ಭಾರತ' ವೆಂಬ ಕಾವ್ಯವನ್ನು ರಚಿಸಿದ್ದಾನೆ.
- ಈ ಕಾವ್ಯದಲ್ಲಿ ಭಾಗವತ ದೃಷ್ಟಿಯೇ ಎಂದರೆ ಕೃಷ್ಣನ ಮಹಿಮೆಯು ಇದರ ವಿಶೇಷ.
ತೊರವೆ ರಾಮಾಯಣ -
15ನೆಯ ಶತಮಾನದಲ್ಲಿ ಜೀವಿಸಿದ ಕುಮಾರ ವಾಲ್ಮೀಕಿಯು ವಿಜಯಪುರ ಜಿಲ್ಲೆಯ ತೊರವೆ ಗ್ರಾಮದವನು.
ಅಲ್ಲಿನ ದೇವರಾದ ನರಸಿಂಹನ ಅಂಕಿತದಲ್ಲಿ ಕಾವ್ಯರಚನೆ ಮಾಡಿದ್ದಾನೆ.
ಈತ ಬರೆದ “ತೊರವೆ ರಾಮಾಯಣ”ವು ಜನಪ್ರಿಯವಾದ ನಡುಗನ್ನಡ ಕಾವ್ಯವಾಗಿದೆ.
'ಕವಿರಾಜಹಂಸ' ಈತನ ಬಿರುದು.
ಕುಮಾರ ವಾಲ್ಮೀಕಿಯ ನಿಜವಾದ ಹೆಸರು: ನರಹರಿ.
ಶ್ರೀ ರಾಮಾಯಣ ದರ್ಶನಂ -
ಇದು ಮಹಾಕಾವ್ಯವಾದ ರಾಮಾಯಣವನ್ನುಆಧರಿಸಿದೆ.
ಕುವೆಂಪುರವರು ರಚಿಸಿದ ಆಧುನಿಕ ಕನ್ನಡ ಸಾಹಿತ್ಯದ ಮೇರು ಕೃತಿ.
ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು 1968 ರಲ್ಲಿ 'ಜ್ಞಾನಪೀಠ ಪ್ರಶಸ್ತಿ'ಯನ್ನು ಕುವೆಂಪುರವರಿಗೆ ತಂದೊದಗಿಸಿದೆ.
3.'ಕನ್ನಡದ ಆದಿಕವಿ' ಎಂದು ಗುರುತಿಸುವ ಕವಿ.
ಕುಮಾರವ್ಯಾಸ
ಪಂಪ
ಜನ್ಮ
ರನ್ನ
ಸರಿ ಉತ್ತರ 2) ಪಂಪ
ಪಂಪ -
ಜನನ : ಕ್ರಿ.ಶ. ೯೦೨, ದುಂದುಭಿ ಸಂವತ್ಸರ
ವೃತ್ತಿ: ವೆಂಗಿ ಚಾಲುಕ್ಯವಂಶದ ಎರಡನೆಯ ಅರಿಕೇಸರಿಯ ಆಸ್ಥಾನ ಪಂಡಿತ.
ಕೃತಿಗಳು –
ಆದಿಪುರಾಣ,
ವಿಕ್ರಮಾರ್ಜುನ ವಿಜಯ
ಪ್ರಶಸ್ತಿ, ಪುರಸ್ಕಾರ, ಬಿರುದು-
ಸಂಸಾರ ಸಾರೋದಯ,
ಸರಸ್ವತೀ ಮಣಿಹಾರ,
ಕವಿತಾಗುಣಾರ್ಣವ,
ಆದಿಕವಿ,
ಕನ್ನಡ ಕಾವ್ಯಗಳ ಜನಕ,
ನಾಡೋಜ,
ನೂತನ ಯುಗ ಪ್ರವರ್ತಕ.
"ಏಂ ಕಲಿಯೋ, ಸತ್ಕವಿಯೋ ಕವಿತಾಗುಣಾರ್ಣಭವಂ"ಎಂದು ಪಂಪನನ್ನು ಹೊಗಳಿದ್ದಾರೆ.
"ಪಸರಿಪ ಕನ್ನಡಕ್ಕೋರ್ವನೇ ಸತ್ಕವಿ ಪಂಪನಾವಗಂ" ಎಂದು ನಾಗರಾಜ ಕವಿಯು ಪಂಪನನ್ನು ಹೊಗಳಿದ್ದಾನೆ.
ಕುಮಾರವ್ಯಾಸ - (ಕ್ರಿ.ಶ. 1350-1400)
ಕುಮಾರವ್ಯಾಸನ ಮೂಲ ಹೆಸರು ನಾರಾಯಣಪ್ಪ.
"ಗದುಗಿನ ನಾರಾಯಣಪ್ಪ" ಎಂದು ಸಾಮಾನ್ಯವಾಗಿ ಕುಮಾರವ್ಯಾಸನನ್ನು ಗುರುತಿಸಲಾಗುತ್ತದೆ.
ಈತನ ಕಾವ್ಯ ನಾಮ ಕುಮಾರವ್ಯಾಸ.
ವ್ಯಾಸ ಮಹಾಕವಿಯ ಮಾನಸಪುತ್ರ ತಾನೆನ್ನುವ ಭಾವದಿಂದ ತನ್ನನ್ನು ಕುಮಾರವ್ಯಾಸ ಎಂದು ಕರೆದುಕೊಂಡಿದ್ದಾನೆ.
ಕೃತಿಗಳು -
ಕರ್ಣಾಟ ಭಾರತ ಕಥಾಮಂಜರಿ.( ಗದುಗಿನ ಭಾರತ,ಅಥವಾ ಕನ್ನಡ ಭಾರತ ಅಥವಾ ಕುಮಾರವ್ಯಾಸ ಭಾರತ )
ಐರಾವತ.
ರನ್ನ-
(949 - 1020). ಹತ್ತನೆಯ ಶತಮಾನದ ಕನ್ನಡ ಸಾಹಿತ್ಯದ ಕವಿ ರತ್ನತ್ರಯರಲ್ಲಿ ಒಬ್ಬನಾಗಿದ್ದಾನೆ.
ಶಕ್ತಿಕವಿ ಎಂದೇ ಖ್ಯಾತನಾಗಿದ್ದಾನೆ.
ಚಾಲುಕ್ಯರ ಎರಡನೆಯ ತೈಲಪ ಚಕ್ರವರ್ತಿ ಆಹವಮಲ್ಲ ಹಾಗೂ ಅವನ ಮಗ ಸತ್ಯಾಶ್ರಯ ಇರವಬೆಡಂಗ ಇವರ ಆಸ್ಥಾನಕವಿಯಾಗಿದ್ದನು.
ಕೃತಿಗಳು-
ಅಜಿತಪುರಾಣ .
ಸಾಹಸಭೀಮ ವಿಜಯಂ (ಮಹಾಕವಿ ರನ್ನನ ಗದಾಯುದ್ಧಚಕ್ರೇಶ್ವರ ಚರಿತ - ಲಭ್ಯವಿಲ್ಲ.
ಪರಶುರಾಮ ಚರಿತ - ಲಭ್ಯವಿಲ್ಲ.
ರನ್ನಕಂದ (12ಕಂದಪದ್ಯಗಳ ನಿಘಂಟು.)
ಬಿರುದುಗಳು –
ಕವಿಚಕ್ರವರ್ತಿ
ಕವಿರತ್ನ
ಅಭಿನವ ಕವಿಚಕ್ರವರ್ತಿ
ಕವಿ ರಾಜಶೇಖರ
ಕವಿಜನ ಚೂಡಾರತ್ನ
ಕವಿ ತಿಲಕ
ಉಭಯಕವಿ
ಜನ್ನ –
ಬಿರುದಾಂಕಿತನಾದ ಮಹಾಕವಿ ಜನ್ನನು ಕರ್ನಾಟಕದಲ್ಲಿದ್ದ, ಹಳಗನ್ನಡ ಕವಿ.
"ನಾಳ್ಪ್ರಿಭು ಜನಾರ್ಧನದೇವ" ಎಂದು ತನ್ನನ್ನು ಕರೆದುಕೊಂಡಿದ್ದಾನೆ.
ದಂಡಾಧಿಪತಿಯೂ ಮಂತ್ರಿಯೂ ಆಗಿದ್ದ.
ಹೊಯ್ಸಳ ವೀರಬಲ್ಲಾಳನ ಮಹಾಮಂತ್ರಿಯೂ,ಸೈನ್ಯಾಧಿಪತಿಯೂ,ಆಸ್ಥಾನಕವಿಯೂ ಆಗಿದ್ದನು.
ನಂತರ ಪಟ್ಟಕ್ಕೆ ಬಂದ ೨ನೆಯ ನರಸಿಂಹನ ಕಾಲದಲ್ಲೂ ಜನ್ನನು ಆಸ್ಥಾನಕವಿಯಾಗಿ ಮುಂದುವರಿದನು.
ಕೃತಿಗಳು-
ಅನುಭವಮುಕುರ
ಯಶೋಧರ ಚರಿತೆ
ಅನಂತನಾಥಪುರಾಣ
4.'ಅಶ್ವತ್ಥಾಮನ್' ಇದು__ನಾಟಕ.
ಸಾಮಾಜಿಕ
ಚಾರಿತ್ರಿಕ
ಸುಖಾಂತ
ದುರಂತ
ಸರಿ ಉತ್ತರ 4)ದುರಂತ
‛ಅಶ್ವತ್ಥಾಮನ್ ’ ಬಿ.ಎಂ.ಶ್ರೀಯವರು ರಚಿಸಿದ ನಾಟಕ .
ಇದು ಕನ್ನಡ ಸಾಹಿತ್ಯದ ಮೊಟ್ಟಮೊದಲ ರುದ್ರ ನಾಟಕ.
ಗ್ರೀಸ್ ದೇಶದ ಮಹಾ ನಾಟಕಕಾರರಲ್ಲಿ ಒಬ್ಬನಾದ ಸಾಫೋಕ್ಲೀಸ್ ನು ರಚಿಸಿದ “ಏಜಾಕ್ಸ್” ನಾಟಕದ ಸ್ಪೂರ್ತಿಯಿಂದ ರಚಿಸಿದ ನಾಟಕ ಅಶ್ವತ್ಥಾಮನ್.
ನಾಟಕದ ಕಥಾವಸ್ತು -
ಮಹಾಭಾರತದ ಪ್ರಸಿದ್ಧ ವ್ಯಕ್ತಿಗಳಲ್ಲಿ ಅಶ್ವತ್ಥಾಮ ಒಬ್ಬ.
ಈತನನ್ನು ಕುರಿತದ್ದು ಈ ನಾಟಕದ ಕಥೆ.
ಅಶ್ವತ್ಥಾಮ ಪರಾಕ್ರಮಿ ಮತ್ತು ಪ್ರಾಮಾಣಿಕ.
ಮಹಾಭಾರತದ ಯುದ್ಧದಲ್ಲಿ ತನ್ನ ನಾಯಕ ದುರ್ಯೋಧನನ ಮರಣದಿಂದ ಪಾಂಡವರ ಮೇಲೆ ಈತನಿಗೆ ಬಹಳ ಕೋಪವುಂಟಾಗುತ್ತದೆ.
ಆ ಕೋಪದಲ್ಲಿಯೇ ಅರ್ಧರಾತ್ರಿ ಸಮಯದಲ್ಲಿ ಪಾಂಡವರ ಪಾಳಯಕ್ಕೆ ನುಗ್ಗಿ,
ನಿದ್ರೆಯಲ್ಲಿದ್ದ ಅನೇಕ ಪಶುಗಳು, ಮಕ್ಕಳು ಮತ್ತು ಹೆಂಗಸರನ್ನೂ ಕೊಂದು, ತನ್ನ ಮನೆಗೆ ಹೋಗುತ್ತಾನೆ.
ಅನಂತರ ನಿದ್ರೆಯಲ್ಲಿದ್ದ ಪ್ರಾಣಿಗಳನ್ನು, ಮಕ್ಕಳನ್ನು, ಹೆಂಗಸರನ್ನು ತನ್ನಂಥ ವೀರ ಕೊಂದದ್ದು ಹೇಡಿತನ ಎನಿಸುತ್ತದೆ.
ಇದೊಂದು ಪಾಪದ ಕೆಲಸ ಎಂದೂ ತಿಳಿಯುತ್ತಾನೆ.
ಇದರಿಂದ ಅಶ್ವತ್ಥಾಮ ಬಹಳ ಪಶ್ಚಾತ್ತಾಪ ಪಡುತ್ತಾನೆ.
ಕೊನೆಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ.
ಹೀಗಾಗಿ ’ಅಶ್ವತ್ಥಾಮನ್’ ನಾಟಕ ಒಂದು ದುಂರತನಾಟಕ.
5.'ಅಭಿನವ ಪಂಪ' ಎಂದು ತನ್ನನ್ನು ಕರೆದುಕೊಂಡ ಕವಿ.
ಪೊನ್ನ
ರನ್ನ
ಜನ್ಮ
ನಾಗಚಂದ್ರ
ಸರಿ ಉತ್ತರ 4)ನಾಗಚಂದ್ರ
ನಾಗಚಂದ್ರ -
ಕ್ರಿ.ಶ.1100ರಲ್ಲಿ ಇದ್ದಿರಬಹುದಾದ ಪ್ರಸಿದ್ಧ ಕವಿ.
ಪಂಪನ ಮೇಲಿನ ಅಭಿಮಾನದಿಂದ ಈತ ತನ್ನನ್ನು ತಾನು ‘ಅಭಿನವ ಪಂಪ ‘ಎಂದು ಕರೆದು ಕೊಂಡ.
ಹೊಯ್ಸಳರ ೧ನೇಯ ಬಲ್ಲಾಳನ ಆಸ್ಧಾನದಲ್ಲಿ ಇದನು.
ಕಾವ್ಯಗಳು-
ರಾಮಚಂದ್ರ ಚರಿತ ಪುರಾಣ (ಪಂಪರಾಮಾಯಣ)
ಮಲ್ಲಿನಾಥ ಪುರಾಣ .
ಬಿರುದುಗಳು-
'ಭಾರತಿ ಕರ್ಣಪೂರ',
'ಕವಿತಾ ಮನೋಹರ',
'ಸಾಹಿತ್ಯ ವಿದ್ಯಾಧರ',
'ಜನಸ್ಥಾನರತ್ನಪ್ರದೀಪ',
'ಸೂಕ್ತಿ ಮುಕ್ತಾ ವಸಂತ'.
ಪೊನ್ನ –
ಮೂವರು ರತ್ನತ್ರಯರಲ್ಲಿ ಒಬ್ಬನು. (ಇತರ ಇಬ್ಬರೆಂದರೆ ಪಂಪ ಹಾಗು ರನ್ನ).
ಕಾಲ ಕ್ರಿ.ಶ.950.
ಚಕ್ರವರ್ತಿ 3ನೆಯ ಕೃಷ್ಣನ ಆಸ್ಥಾನದಲ್ಲಿ(939-965) ಪೊನ್ನನು ಆಸ್ಥಾನ ಕವಿಯಾಗಿದ್ದನು.
ಕನ್ನಡ ಹಾಗು ಸಂಸ್ಕೃತ ಗಳಲ್ಲಿ ಇವನಿಗೆ ಅಪಾರ ಪಾಂಡಿತ್ಯವಿದ್ದುದರಿಂದ ಈತನಿಗೆ ‘ಉಭಯ ಕವಿಚಕ್ರವರ್ತಿ’ ಎಂದು ಕರೆಯಲಾಗುತ್ತಿತ್ತು.
ತನ್ನನ್ನು ‘ಕುರುಳ್ಗಳ ಸವಣ’ ಎಂದು ಕರೆದುಕೊಂಡಿದ್ದಾನೆ.
ಕಾವ್ಯಗಳು-
ಶಾಂತಿಪುರಾಣ
ಜಿನಾಕ್ಷರಮಾಲೆ( 'ಕ'ಕಾರದಿಂದ ಹಿಡಿದು 'ಳ'ಕಾರದವರೆಗೂ ಕ್ರಮವಾಗಿ ಒಂದೊಂದು ಪದ್ಯಾಕ್ಷರ ಆರಂಭವಾಗುತ್ತದೆ.)
ಭುವನೈಕ ರಾಮಾಭ್ಯುದಯ. (ಚಂಪೂ ಕಾವ್ಯ) .
'ದಾನಚಿಂತಾಮಣಿ'ಅತ್ತಿಮಬ್ಬೆಯು ಈ ಕೃತಿಯ ಸಾವಿರ ಪ್ರತಿಗಳನ್ನು ಮಾಡಿಸಿ,ಧರ್ಮಶ್ರದ್ಧೆಯುಳ್ಳವರಿಗೆ ಹಂಚಿದಳಂತೆ.
ಗತಪ್ರತ್ಯಾಗತ .
ರನ್ನ-
(949 - 1020). ಹತ್ತನೆಯ ಶತಮಾನದ ಕನ್ನಡ ಸಾಹಿತ್ಯದ ಕವಿ ರತ್ನತ್ರಯರಲ್ಲಿ ಒಬ್ಬನಾಗಿದ್ದಾನೆ.
ಶಕ್ತಿಕವಿ ಎಂದೇ ಖ್ಯಾತನಾಗಿದ್ದಾನೆ.
ಚಾಲುಕ್ಯರ ಎರಡನೆಯ ತೈಲಪ ಚಕ್ರವರ್ತಿ ಆಹವಮಲ್ಲ ಹಾಗೂ ಅವನ ಮಗ ಸತ್ಯಾಶ್ರಯ ಇರವಬೆಡಂಗ ಇವರ ಆಸ್ಥಾನಕವಿಯಾಗಿದ್ದನು.
ಕೃತಿಗಳು-
ಅಜಿತಪುರಾಣ .
ಸಾಹಸಭೀಮ ವಿಜಯಂ (ಮಹಾಕವಿ ರನ್ನನ ಗದಾಯುದ್ಧಚಕ್ರೇಶ್ವರ ಚರಿತ - ಲಭ್ಯವಿಲ್ಲ.
ಪರಶುರಾಮ ಚರಿತ - ಲಭ್ಯವಿಲ್ಲ.
ರನ್ನಕಂದ (12ಕಂದಪದ್ಯಗಳ ನಿಘಂಟು.
ಬಿರುದುಗಳು –
ಕವಿಚಕ್ರವರ್ತಿ
ಕವಿರತ್ನ
ಅಭಿನವ ಕವಿಚಕ್ರವರ್ತಿ
ಕವಿ ರಾಜಶೇಖರ
ಕವಿಜನ ಚೂಡಾರತ್ನ
ಕವಿ ತಿಲಕ
ಉಭಯಕವಿ
ಜನ್ನ –
ಬಿರುದಾಂಕಿತನಾದ ಮಹಾಕವಿ ಜನ್ನನು ಕರ್ನಾಟಕದಲ್ಲಿದ್ದ, ಹಳಗನ್ನಡ ಕವಿ
"ನಾಳ್ಪ್ರಿಭು ಜನಾರ್ಧನದೇವ" ಎಂದು ತನ್ನನ್ನು ಕರೆದುಕೊಂಡಿದ್ದಾನೆ.
ದಂಡಾಧಿಪತಿಯೂ ಮಂತ್ರಿಯೂ ಆಗಿದ್ದ.
ಹೊಯ್ಸಳ ವೀರಬಲ್ಲಾಳನ ಮಹಾಮಂತ್ರಿಯೂ,ಸೈನ್ಯಾಧಿಪತಿಯೂ,ಆಸ್ಥಾನಕವಿಯೂ ಆಗಿದ್ದನು.
ನಂತರ ಪಟ್ಟಕ್ಕೆ ಬಂದ ೨ನೆಯ ನರಸಿಂಹನ ಕಾಲದಲ್ಲೂ ಜನ್ನನು ಆಸ್ಥಾನಕವಿಯಾಗಿ ಮುಂದುವರಿದನು.
ಕೃತಿಗಳು-
ಅನುಭವಮುಕುರ
ಯಶೋಧರ ಚರಿತೆ
6.ಎಂ. ಗೋಪಾಲಕೃಷ್ಣ ಅಡಿಗರಿಗೆ “ಕಬೀರ ಸಮಾನ್" ನೀಡಿದ ರಾಜ್ಯ
ರಾಜಸ್ತಾನ
ತಮಿಳನಾಡು
ಕೇರಳ
ಮಧ್ಯ ಪ್ರದೇಶ
ಸರಿ ಉತ್ತರ – 4) ಮಧ್ಯಪ್ರದೇಶ.
ಅಡಿಗರು ಹುಟ್ಟಿದ್ದು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೊಗೇರಿ ಎಂಬ ಹಳ್ಳಿಯಲ್ಲಿ.
ಇವರ ಮೊದಲ ಕವನ ಸಂಕಲನ ‘ಭಾವತರಂಗ’,
ಭೂಮಿಗೀತ, ವರ್ಧಮಾನ, ಕಟ್ಟುವೆವು ನಾವು ಮುಂತಾದವು ಇವರ ಪ್ರಸಿದ್ದ ಕವನ ಸಂಕಲನಗಳು.
ಅನಾಥೆ, ಆಕಾಶದೀಪ- ಕಾದಂಬರಿಗಳು.
ಗೋಪಾಲ ಕೃಷ್ಣರಿಗೆ ಒಲಿದ ಇತರ ಪ್ರಶಸ್ತಿಗಳು:-
’ವರ್ಧಮಾನ’ ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ' (1974) .
ಕೇರಳದ ಪ್ರತಿಷ್ಠಿತ `ಕುಮಾರ್ ಸಮ್ಮಾನ್' ಪ್ರಶಸ್ತಿ(1979).
ಮಧ್ಯ ಪ್ರದೇಶ ಸರಕಾರದ "ಕಬೀರ್ ಸಮ್ಮಾನ್" ಪ್ರಶಸ್ತಿ
ಡಕ್ಟರ್ ಆಫ್ ಲಿಟರೇಚರ್' ಪ್ರಶಸ್ತಿ
'ರಾಜ್ಯೋತ್ಸವ ಪ್ರಶಸ್ತಿ'
'ಪಂಪ ಪ್ರಶಸ್ತಿ'.(1993)
“ಕಬೀರ ಸನ್ಮಾನ” ಪ್ರಶಸ್ತಿ ಪಡೆದ ಇನ್ನೋರ್ವ ಕನ್ನಡಿಗ ‘ಶ್ರೀ ಚಂದ್ರಶೇಖರ ಕಂಬಾರ’.
1.ಎಂಟನೆಯ ಜ್ಞಾನಪೀಠ ಪಡೆದವರು
ವಿ.ಕೃ.ಗೋಕಾಕ
ಚಂದ್ರಶೇಖರ ಕಂಬಾರ
ಕೆ.ಶಿವರಾಮ ಕಾರಂತ
ಕುವೆಂಪು
ಸರಿ ಉತ್ತರ 2) ಚಂದ್ರಶೇಖರ ಕಂಬಾರ